Category: Kannada

ಸಿಂಧಗಿ ಕ್ಷೇತ್ರದ ಉಪ ಚುನಾವಣೆ; ಜಾತಿ ಲೆಕ್ಕಾಚಾರ ಹೀಗಿದೆ

ವಿಜಯಪುರ, ಅಕ್ಟೋಬರ್ 24; ವಿಜಯಪುರ ಜಿಲ್ಲೆಯ  ಸಿಂಧಗಿ ಕ್ಷೇತ್ರದ ಉಪ ಚುನಾವಣೆ ಪ್ರಚಾರ ಬಿರುಸಿನಿಂದ ನಡೆಯುತ್ತಿದೆ. ಪ್ರಚಾರದ ಭರಾಟೆ ನಡುವೆಯೇ ಕ್ಷೇತ್ರದಲ್ಲಿ ಜಾತಿ ಲೆಕ್ಕಾಚಾರ ಆರಂಭವಾಗಿದೆ. ಅಕ್ಟೋಬರ್ 30ರಂದು ಮತದಾನ ನಡೆಯಲಿದ್ದು, ನವೆಂಬರ್ 2ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಉಪ ಚುನಾವಣೆಗೆ ಬಿಜೆಯಿಂದ ರಮೇಶ ಭೂಸನೂರ, ಕಾಂಗ್ರೆಸ್‌ನಿಂ ಅಶೋಕ ಮನಗೂಳಿ ಮತ್ತು ಜೆಡಿಎಸ್‌ನಿಂದ ನಾಜಿಯಾ ಅಂಗಡಿ ಅಭ್ಯರ್ಥಿಗಳು.

ಬಿ.ಇ.ಎಲ್ ರಸ್ತೆ ಬಳಿ ದಿಂಡಿಗಲ್ ತಲಪ್ಪಕಟ್ಟಿ ಬಿರ್ಯಾನಿ ಸವಿಯಿರಿ

ಬೆಂಗಳೂರು, ಅಕ್ಟೋಬರ್ 24: ಕಳೆದ 60ಕ್ಕೂ ಹೆಚ್ಚು ವರ್ಷಗಳಿಂದ ದಿಂಡಿಗಲ್ ತಲಪ್ಪಕಟ್ಟಿ ಕಾಲದ ಪರೀಕ್ಷೆಯನ್ನು ಮೀರಿ ನಿಂತಿದೆ. 1957ರಲ್ಲಿ ನಾಗಸ್ವಾಮಿ ನಾಯ್ಡು ಅವರಿಂದ ದಿಂಡಿಗಲ್‍ನಲ್ಲಿ ಪ್ರಾರಂಭವಾದ ಆನಂದ ವಿಲಾಸ್ ಬಿರಿಯಾನಿ ಹೋಟೆಲ್ ಇಂದಿನ ದಿಂಡಿಗಲ್ ತಲಪ್ಪಕಟ್ಟಿ ಬಿರಿಯಾನಿ ಹೋಟೆಲ್ ಆಗಿದೆ. ದಿಂಡಿಗಲ್ ತಲಪ್ಪಕಟ್ಟಿ ದಕ್ಷಿಣ ಭಾರತದ ಅತ್ಯಂತ ದೊಡ್ಡ ಕ್ಯಾಶುಯಲ್ ಡೈನ್ ಇನ್ ಸರಣಿಯಾಗಿದ್ದು ಅದರ ವಂಶ

ಕಲಬುರಗಿ; ಅಕ್ಟೋಬರ್ 26ರಂದು ಕ್ಯಾಂಪಸ್ ಸಂದರ್ಶನ

ಕಲಬುರಗಿ, ಅಕ್ಟೋಬರ್ 24; ಬೆಂಗಳೂರಿನ ಎಂ.ಎಸ್. ಟೊಯೋಟಾ ಇಂಡಸ್ಟ್ರೀಸ್ ಇಂಜೇನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಅಕ್ಟೋಬರ್ 26 ರಂದು ಕಲಬುರಗಿಯಲ್ಲಿ ಕ್ಯಾಂಪಸ್ ಸಂದರ್ಶನ ಆಯೋಜನೆ ಮಾಡಿದ್ದಾರೆ. ಐ. ಟಿ. ಐ. ವೃತ್ತಿಯ ಫಿಟ್ಟರ್, ಟರ್ನರ್, ಮಶಿನಿಸ್ಟ್, ಎಂ. ಎಂ. ವಿ. ಆಂಡ್ ಡಿಸೇಲ್ ಮೆಕ್ಯಾನಿಕ್ ವೃತ್ತಿಗಳಲ್ಲಿ 2019, 2020 ಪಾಸಾದ ಹಾಗೂ 2021ರಂದು ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು

20,000 ಉದ್ಯೋಗ ಸೃಷ್ಟಿ ಜೊತೆ ರೈತರ ಸಾಲಮನ್ನಾ: ಪ್ರಿಯಾಂಕಾ ಗಾಂಧಿ ಘೋಷಣೆ

ಲಕ್ನೋ, ಅಕ್ಟೋಬರ್ 23: ಉತ್ತರ ಪ್ರದೇಶದಲ್ಲಿ ಮುಂಬರುವ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆ ಹಿನ್ನೆಲೆ ಪ್ರತಿಜ್ಞ ಯಾತ್ರೆಗೆ ಚಾಲನೆ ನೀಡಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿಯವರು ಮತದಾರರಿಗೆ ಭರ್ಜರ್ ಗಿಫ್ಟ್ ಕೊಡುವುದಾಗಿ ಘೋಷಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಒಟ್ಟು ಮೂರು ಮಾರ್ಗಗಳಲ್ಲಿ ಕಾಂಗ್ರೆಸ್ ಪ್ರತಿಜ್ಞಾ ಯಾತ್ರೆ ನಡೆಯಲಿದೆ. ಶನಿವಾರ ಬಾರಾಬಂಕಿ ಪ್ರದೇಶದಲ್ಲಿ ಮೊದಲ ಪ್ರತಿಜ್ಞಾ ಯಾತ್ರೆಗೆ ಕಾಂಗ್ರೆಸ್

ಪೇಜಾವರ ವಿಶ್ವೇಶತೀರ್ಥರಿಗೆ ಮರಣೋತ್ತರ ಪದ್ಮವಿಭೂಷಣ ಗೌರವ: ಪ್ರಶಸ್ತಿ ಸ್ವೀಕರಿಸಲಿರುವ ಕಿರಿಯ ಶ್ರೀಗಳು

ಉಡುಪಿ, ಅಕ್ಟೋಬರ್ 23: ನವೆಂಬರ್ 8ರಂದು ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಪದ್ಮಶ್ರೀ ಮತ್ತು ಪದ್ಮವಿಭೂಷಣ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ರಾಜ್ಯದಿಂದ ಈ ಪ್ರಶಸ್ತಿಗಳಿಗೆ ಆಯ್ಕೆಯಾದ ಮಹನೀಯರಿಗೆ ಕೇಂದ್ರ ಸರ್ಕಾರ ಈಗಾಗಲೇ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಅಧಿಕೃತ ಆಹ್ವಾನ ತಲುಪಿಸಿದ್ದು, ನಾಡು ಕಂಡ ಶ್ರೇಷ್ಠ ಸಂತ, ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿಯವರಿಗೂ ಪದ್ಮವಿಭೂಷಣ ಪ್ರಶಸ್ತಿ (ಮರಣೋತ್ತರ) ಪ್ರದಾನ

ಜಮ್ಮು ಕಾಶ್ಮೀರ ಪ್ರವಾಸದಲ್ಲಿ ಅಮಿತ್ ಶಾ: ಹುತಾತ್ಮ ಪೊಲೀಸ್ ಪತ್ನಿಗೆ ಸರ್ಕಾರಿ ಉದ್ಯೋಗ

ಶ್ರೀನಗರ, ಅಕ್ಟೋಬರ್ 23: ಜಮ್ಮು ಕಾಶ್ಮೀರದಲ್ಲಿ ನಾಗರಿಕರ ಮೇಲಿನ ಸರಣಿ ದಾಳಿ ಹಾಗೂ ಪೂಂಚ್ ಜಿಲ್ಲೆಯ ಗಡಿಯಲ್ಲಿ ಉಗ್ರರ ವಿರುದ್ಧದ ಕಾರ್ಯಾಚರಣೆ ನಡುವೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮೂರು ದಿನಗಳ ಕಣಿವೆ ರಾಜ್ಯ ಪ್ರವಾಸದಲ್ಲಿದ್ದಾರೆ. ಕಳೆದ 2019ರ ಆಗಸ್ಟ್ 5ರಂದು ಜಮ್ಮು ಕಾಶ್ಮೀರಕ್ಕೆ 370ರಡಿ ನೀಡಲಾದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ನಂತರದಲ್ಲಿ ಅಮಿತ್ ಶಾ

ಅ.23ರಂದು ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ?

ನವದೆಹಲಿ, ಅಕ್ಟೋಬರ್ 23: ದೇಶದ ಪ್ರಮುಖ ನಗರಗಳಲ್ಲಿ ಅಕ್ಟೋಬರ್ 23 ರಂದು ಚಿನ್ನ ಹಾಗೂ ಬೆಳ್ಳಿ ಬೆಲೆ ಏರಿಳಿತ ಕಂಡಿದೆ. 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 46,450 ರೂ ಆಗಿದ್ದು, 10 ರೂ. ಕಡಿಮೆಯಾಗಿದೆ. ಇನ್ನು 24 ಕ್ಯಾರೆಟ್‌ನ ಅಪರಂಜಿ ಚಿನ್ನ 47,450 ರೂ. ಆಗಿದ್ದು 10 ರೂ. ಕಡಿಮೆಯಾಗಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್‌ನ

ಕೊರೊನಾದಿಂದಾಗಿ ಭಾರತದಲ್ಲಿ ಜನರ ಜೀವಿತಾವಧಿ 2 ವರ್ಷ ಕಡಿತ

ಮುಂಬೈ, ಅಕ್ಟೋಬರ್ 23: ಕೊರೊನಾ ಸೋಂಕಿನಿಂದಾಗಿ ಭಾರತದಲ್ಲಿ ಜನರ ಜೀವಿತಾವಧಿ 2 ವರ್ಷ ಕಡಿತಗೊಂಡಿದೆ ಎಂಬುದು ತಿಳಿದುಬಂದಿದೆ. ಕೋವಿಡ್-19 ಸುಮಾರು ಎರಡು ವರ್ಷಗಳ ಕಾಲ ಭಾರತದಲ್ಲಿನ ಮನುಷ್ಯರ ಜೀವಿತಾವಧಿಯಲ್ಲಿ ಕುಸಿತವನ್ನುಉಂಟುಮಾಡಿದೆ ಎಂದು ನಗರ ಮೂಲದ ಅಂತಾರಾಷ್ಟ್ರೀಯ ಜನಸಂಖ್ಯಾ ಅಧ್ಯಯನ ಸಂಸ್ಥೆಯ ವಿಜ್ಞಾನಿಗಳ ಅಂಕಿಅಂಶಗಳ ವಿಶ್ಲೇಷಣೆ ತಿಳಿಸಿದೆ. ಭಾರತದಲ್ಲಿ ಕೋವಿಡ್ 2ನೇ ಅಲೆಯಂತಹ ವಿನಾಶಕಾರಿ ಅಲೆಯ ಸಾಧ್ಯತೆ ಇಲ್ಲ:

ಹಾನಗಲ್, ಸಿಂಧಗಿ ಚುನಾವಣಾ ಕಣದಲ್ಲಿ ಸಿದ್ದರಾಮಯ್ಯರಿಗೆ ಸಿಕ್ಕ ಸುಳಿವಿನ ಸೀಕ್ರೆಟ್!?

ಹಾನಗಲ್, ಅಕ್ಟೋಬರ್ 23: ಕರ್ನಾಟಕದಲ್ಲಿ ಉಪಚುನಾವಣೆ ಪ್ರಚಾರ ಕಾವೇರಿದೆ. ಹಾನಗಲ್ ಮತ್ತು ಸಿಂಧಗಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವಿನ ಮುನ್ಸೂಚನೆ ಸಿಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸೊರಬ ವಿಧಾನಸಭೆ ಕ್ಷೇತ್ರದ ಕುಬಟೂರಿನಲ್ಲಿ ಮಾತನಾಡಿದ ಅವರು, ಹಾನಗಲ್ ಮತ್ತು ಸಿಂಧಗಿ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಕಡೆಗೆ ನಿರೀಕ್ಷೆಗೂ ಮೀರಿದ

Infographics: ಅಕ್ಟೋಬರ್ 23 ರಂದು ದೇಶದ ವಿವಿಧ ನಗರಗಳಲ್ಲಿ ಚಿನ್ನದ ದರ ಏರಿಳಿತ

ನವದೆಹಲಿ, ಅಕ್ಟೋಬರ್ 23: ದೇಶದಲ್ಲಿ ಅಕ್ಟೋಬರ್ 23ರಂದು ಶನಿವಾರ ಚಿನ್ನ ಹಾಗೂ ಬೆಳ್ಳಿಯ ಬೆಲೆಯಲ್ಲಿ ಏರಿಳಿತ ಕಂಡಿದೆ. ಪ್ರತಿ ದಿನ ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ, ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತಾರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು