• Mon. Nov 28th, 2022

24×7 Live News

Apdin News

ಇಂಡೋನೇಷ್ಯಾ ಭೂಕಂಪದಲ್ಲಿ 162 ಸಾವು, ನೂರಾರು ಮಂದಿಗೆ ಗಾಯ

Byadmin

Nov 22, 2022
ಸಿಯಾಂಜೂರ್, ಇಂಡೋನೇಷ್ಯಾ ನವೆಂಬರ್ 21: ಇಂಡೋನೇಷ್ಯಾದ ಪಶ್ಚಿಮ ಜಾವಾ ಪ್ರಾಂತ್ಯದಲ್ಲಿ ಸೋಮವಾರ ಪ್ರಬಲ ಭೂಕಂಪ ಸಂಭವಿಸಿದ್ದು 162 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಅವಶೇಷಗಳಡಿಯಲ್ಲಿ ಸಿಲುಕಿರುವವರ ಹುಡುಕಾಟ ಕಾರ್ಯ ಮುಂದುವರೆದಿದೆ. ರಿಕ್ಟರ್ ಮಾಪಕದಲ್ಲಿ 5.6 ತೀವ್ರತೆಯ ಭೂಕಂಪ ಪಶ್ಚಿಮ ಜಾವಾದ ಪರ್ವತದ ಸಿಯಾಂಜೂರ್ ಪಟ್ಟಣದ ಸಮೀಪ ಸಂಭವಿಸಿದೆ. ಈ ಪ್ರದೇಶದಲ್ಲಿ 2.5 ದಶಲಕ್ಷಕ್ಕೂ ಹೆಚ್ಚು ಜನರು ವಾಸವಾಗಿದ್ದಾರೆ.