• Wed. Sep 28th, 2022

24×7 Live News

Apdin News

ಮೈಸೂರು ದಸಾರಾ 2022; ಮೈಸೂರು ಅರಮನೆಯಲ್ಲಿ ಸಿಂಹಾಸನದ ಜೋಡಣೆ | Mysuru Dasara 2022; Alignment of throne in Mysuru Palace

Byadmin

Sep 21, 2022


Mysuru

oi-Madhusudhan KR

By ಮೈಸೂರು ಪ್ರತಿನಿಧಿ

|

Google Oneindia Kannada News

ಮೈಸೂರು, ಸೆಪ್ಟೆಂಬರ್‌, 21: ಮೈಸೂರು ಅರಮನೆಯಲ್ಲಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ವಿರಾಜಮಾನರಾಗಿ ಖಾಸಗಿ ದರ್ಬಾರ್ ನಡೆಸುವ ರತ್ನ ಖಚಿತ ಸಿಂಹಾಸನವನ್ನು ಜೋಡಣೆ ಮಾಡಲಾಯಿತು.

ನಾಡಹಬ್ಬ ದಸರಾ ಮಹೋತ್ಸವದ ವೇಳೆ ಮೈಸೂರು ಅರಮನೆಯಲ್ಲಿ ನಡೆಯಲಿರುವ ಧಾರ್ಮಿಕ ಕಾರ್ಯಗಳಲ್ಲಿ ಪ್ರಮುಖವಾಗಿರುವುದೇ ಈ ಖಾಸಗಿ ದರ್ಬಾರ್‌ ಆಗಿದೆ. ಖಾಸಗಿ ದರ್ಬಾರ್‌ಗೆ ಬಳಸುವ ರತ್ನ ಖಚಿತ ಸಿಂಹಾಸನ ಹಾಗೂ ಬೆಳ್ಳಿಯ ಭದ್ರಾಸನವನ್ನು ಬಿಗಿ ಭದ್ರತೆಯಲ್ಲಿ ಜೋಡಿಸಲಾಯಿತು.

ಮಂಗಳೂರು ದಸರಾ; 300ರೂಪಾಯಿನಲ್ಲಿ ಮಂಗಳೂರಿನ ಒಂಭತ್ತು ದೇವಸ್ಥಾನಗಳ ದರ್ಶನ ಮಂಗಳೂರು ದಸರಾ; 300ರೂಪಾಯಿನಲ್ಲಿ ಮಂಗಳೂರಿನ ಒಂಭತ್ತು ದೇವಸ್ಥಾನಗಳ ದರ್ಶನ

ಸೆಪ್ಟೆಂಬರ್‌ 26ರಿಂದ ದಸರಾ ಮಹೋತ್ಸವಕ್ಕೆ ಚಾಲನೆ ದೊರೆಯಲಿದೆ. ಯದುವಂಶದ ಪರಂಪರೆಯಂತೆ ನವರಾತ್ರಿ ವೇಳೆ ಹಲವು ಖಾಸಗಿ ದರ್ಬಾರ್ ನಡೆಯಲಿದೆ. ಅಪ್ಪಟ ಚಿನ್ನದಿಂದ ತಯಾರಿಸಿರುವ ಶತಮಾನಗಳ ಇತಿಹಾಸವಿರುವ ರತ್ನ ಖಚಿತ ಸಿಂಹಾಸನದ ಮೇಲೆ ರಾಜರು ಆಸೀನರಾಗಿ ವಿಧಿ ವಿಧಾನಗಳನ್ನು ಪೂರೈಸಲಿದ್ದಾರೆ.

ಅರಮನೆಯಲ್ಲಿ ಪೂಜಾ ಕೈಂಕರ್ಯಗಳು

ನವರಾತ್ರಿ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಮಂಗಳವಾರ ಬೆಳಗ್ಗೆ 7ರಿಂದ 10:58ರೊಳಗೆ ಸಲ್ಲುವ ಶುಭ ಲಗ್ನದಲ್ಲಿ ನಾನಾ ಪೂಜಾ ಕೈಂಕರ್ಯ ಜರುಗಿದ ಬಳಿಕ ಸಿಂಹಾಸನ ಜೋಡಣಾ ಪ್ರಕ್ರಿಯೆ ನಡೆಯಿತು. ಮಧ್ಯಾಹ್ನ 1:15ರ ವೇಳೆಗೆ ಜೋಡಣೆ ಕಾರ್ಯ ಪೂರ್ಣಗೊಂಡಿತು. ಧಾರ್ಮಿಕ ಕಾರ್ಯಕ್ರಮದ ದರ್ಬಾರ್ ಹಾಲ್‌ನಲ್ಲಿ ಸಿಂಹಾಸನ ಜೋಡಣೆ ನಡೆದ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದಲೇ ಪೂಜಾ ಕೈಂಕರ್ಯಗಳು ಜರುಗಿದವು. ಅರಮನೆಯ ಪುರೋಹಿತರಾದ ಶಹರಿ, ಕುಮಾರ್ ಹಾಗೂ ಶ್ಯಾಮ್ ದೀಕ್ಷಿತ್ ನೇತೃತ್ವದಲ್ಲಿ ಗಣಪತಿ ಹೋಮ, ಚಾಮುಂಡಿ ಪೂಜೆ, ಶಾಂತಿ ಹೋಮ, ನವಗ್ರಹ ಪೂಜೆ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ಜರುಗಿದವು. ಪೂರ್ಣಾಹುತಿ ವೇಳೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಪಾಲ್ಗೊಂಡರು.
ಕಾರ್ಯದರ್ಶಿ ಲಕ್ಷ್ಮೀನಾರಾಯಣ್, ಮಹೇಂದ್ರ, ಅರಮನೆಯ ಆಡಳಿತ ಮಂಡಳಿಯ ಉಪನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ, ಅರಮನೆಯ ಭದ್ರತಾ ಪಡೆಯ ಎಸಿಪಿ ಚಂದ್ರಶೇಖರ್ ಸೇರಿದಂತೆ ಕೆಲವರು ಮಾತ್ರ ಉಪಸ್ಥಿತರಿದ್ದರು.

ರಾಜವಂಶಸ್ಥರು ಸಮ್ಮತಿಸಿದರೆ ಗುರುವಾರದಿಂದಲೇ ಅರಮನೆ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ಪ್ರತ್ಯೇಕ ಟಿಕೆಟ್ ವ್ಯವಸ್ಥೆಗೆ ಅವಕಾಶ ನೀಡಲಾಗುತ್ತದೆ ಎಂದು ಅರಮನೆ ಮೂಲಗಳು ತಿಳಿಸಿವೆ.

Mysuru Dasara 2022; Alignment of throne in Mysuru Palace

ಮರಳಿನಲ್ಲಿ ಮೂಡಿಬಂದ ಅಪ್ಪು

ಮೈಸೂರಿನ ದಸರಾ ವಸ್ತು ಪ್ರದರ್ಶನ ಆವರಣದಲ್ಲಿ ನಟ ಡಾ.ಪುನೀತ್ ರಾಜ್‌ಕುಮಾರ್ ನೆನಪಿನಾರ್ಥವಾಗಿ ಮರಳು ಕಲಾಕೃತಿ ತಯಾರಾಗಿದೆ. ಸದ್ಯ ಇದು ಎಲ್ಲರನ್ನು ಗಮನ ಸೆಳೆಯುತ್ತಲೇ ಇದೆ. ದಸರಾ ವಸ್ತು ಪ್ರದರ್ಶನ ಆವರಣದಲ್ಲಿ ಮರಳಿನಲ್ಲಿ ಅರಳಿದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಕಾಲಾಕೃತಿ ಸಾರ್ವಜನಿಕರನ್ನು ತನ್ನತ್ತ ಸೆಳೆಯುತ್ತಿದೆ. ಅಪ್ಪು ಜೊತೆ ಡಾ.ರಾಜ್‌ಕುಮಾರ್ ಹಾಗೂ ಪಾರ್ವತಮ್ಮ ರಾಜ್‌ಕುಮಾರ್ ಮರಳು ಕಲಾಕೃತಿ ಕೂಡ ಮೂಡಿಬಂದಿದೆ. 350 ಟನ್ ಎಂ ಸ್ಯಾಂಡ್ ಬಳಸಿ ಕಾಲಾಕೃತಿ ರಚಿಸಲಾಗಿದೆ. ಮೈಸೂರಿನ ಹೆಸರಾಂತ ಮರಳು ಕಲಾವಿದೆ ಗೌರಿ ಕೈ ಚಳಕದಲ್ಲಿ ಕಲಾಕೃತಿ ಮೂಡಿಬಂದಿದೆ. ಪುನೀತ್ ರಾಜ್‌ಕುಮಾರ್ ಕೊನೆಯ ಚಿತ್ರ ಜೇಮ್ಸ್, ಬಾಲ ನಟನೆಯ ಆರಂಭಿಕ ಚಿತ್ರದ ಪಾತ್ರಗಳನ್ನು ಬಿಡಿಸಿದ್ದಾರೆ.

English summary

grand preparation for Dasara, jewel encrusted Alignment of throne in Mysuru palace. Know more,

Story first published: Wednesday, September 21, 2022, 20:05 [IST]