“ಭಂಡ ನಾನು, ಯಾವ ಸರ್ಕಾರ ಇದ್ದರೂ ಕೆಲ್ಸ ಮಾಡ್ತೀನಿ” ಎಂದ ರೇಣುಕಾಚಾರ್ಯ

Davanagere

oi-Sumalatha N

By ದಾವಣಗೆರೆ ಪ್ರತಿನಿಧಿ

| Updated: Friday, August 23, 2019, 17:14 [IST]

ದಾವಣಗೆರೆ, ಆಗಸ್ಟ್ 23: “ಯಾವುದೇ ಸರ್ಕಾರವಿರಲಿ, ನನಗೆ ಅಭಿವೃದ್ಧಿ ಮುಖ್ಯ. ಈಗ ನಮ್ಮ ಸರ್ಕಾರ ಬಂದಿದೆ, ಇನ್ನೂ ಹೆಚ್ಚಿನ ಅಭಿವೃದ್ಧಿ ಮಾಡುತ್ತೇನೆ. ಭಂಡ ನಾನು, ಯಾವ ಸರ್ಕಾರ ಇದ್ದರೂ ಕ್ಷೇತ್ರದ ಅಭಿವೃದ್ಧಿ ಕೆಲಸ‌ ಬಿಡುವುದಿಲ್ಲ” ಎಂದಿದ್ದಾರೆ ಶಾಸಕ ರೇಣುಕಾಚಾರ್ಯ.

ನಾನು ಅತೃಪ್ತ ನಾಯಕನೂ ಅಲ್ಲ, ಬಂಡಾಯ ನಾಯಕನೂ ಅಲ್ಲ: ರೇಣುಕಾಚಾರ್ಯ

ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲ್ಲೂಕಿನಲ್ಲಿ ನೆರೆ ಸಂತ್ರಸ್ತರಿಗೆ ಚೆಕ್ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರೇಣುಕಾಚಾರ್ಯರ ಸ್ವಾಭಿಮಾನಕ್ಕೆ ಧಕ್ಕೆಯಾದರೆ ಏನು ಮಾಡ್ತಾರೆ ? | Oneindia Kannada

I Will Do Development Work In Any Government Said Renukacharya In Nyamati

ಸ್ವಾಭಿಮಾನಕ್ಕೆ ಧಕ್ಕೆಯಾದರೆ ರಾಜೀನಾಮೆ ನೀಡುವೆ: ರೇಣುಕಾಚಾರ್ಯ

ಪ್ರವಾಹದಿಂದ ತತ್ತರಿಸಿ ಮನೆ ಮಠ ಕಳೆದುಕೊಂಡ ಸಂತ್ರಸ್ತರಿಗೆ ಚೆಕ್ ವಿತರಿಸಿದರು. ಇದೇ ಸಂದರ್ಭ ಮಾತನಾಡಿದ ಅವರು, “ನ್ಯಾಮತಿ ತಾಲ್ಲೂಕನ್ನು ಇನ್ನಷ್ಟು ‌ಅಭಿವೃದ್ದಿ‌ ಮಾಡುತ್ತೇನೆ. ಜಗದೀಶ್ ಶೆಟ್ಟರ್ ಅವರು ಮುಖ್ಯಮಂತ್ರಿಯಾಗಿದ್ದಾಗ ಹೊನ್ನಾಳಿಯನ್ನು ಅಭಿವೃದ್ಧಿ ಮಾಡಿದ್ದೆ. ಈಗ ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದಾರೆ. ನ್ಯಾಮತಿಯನ್ನು ಅಭಿವೃದ್ಧಿ ಮಾಡುವ ಪಣ ತೊಟ್ಟಿದ್ದೇನೆ” ಎಂದು ಹೇಳಿದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ – ಉಚಿತ ನೋಂದಣಿ !