ಬಳ್ಳಾರಿ, ಜನವರಿ, 22: ಬಳ್ಳಾರಿ ಉತ್ಸವ ಹಿನ್ನೆಲೆ ಶ್ವಾನ ಪ್ರದರ್ಶನವನ್ನು ಏರ್ಪಡಿಸಲಾಗಿದ್ದು, ವಿವಿಧ ತಳಿಗಳ ಶ್ವಾನಗಳ ವೈವಿಧ್ಯವೇ ಗಮನ ಸೆಳೆದಿದೆ. ಜಿಲ್ಲಾಡಳಿತ, ಪಶು ಸಂಗೋಪನೆ ಹಾಗೂ ಪಶು ವೈದ್ಯಕೀಯ ಸೇವಾ ಇಲಾಖೆ ವತಿಯಿಂದ ಬಳ್ಳಾರಿ ಉತ್ಸವದ ಅಂಗವಾಗಿ ಭಾನುವಾರ (ಜನವರಿ 22) ಹಮ್ಮಿಕೊಂಡಿದ್ದ “ಶ್ವಾನ ಪ್ರದರ್ಶನ” ಎಲ್ಲರ ಗಮನ ಸೆಳೆದಿದೆ.ಶ್ವಾನಗಳು ಸ್ಪರ್ಧಾ ಅಂಕಣದಲ್ಲಿ ಮಾಲೀಕರ ಜೊತೆ ಓಡಾಡುತ್ತಿದ್ದವು.