• Thu. Aug 11th, 2022

24×7 Live News

Apdin News

Biography: ನೂತನ ಉಪರಾಷ್ಟ್ರಪತಿ ಜಗದೀಪ್ ಧನಕರ್ ಜೀವನ ಹಾದಿ | New Vice President Jagdeep Dhankhar, Profile, Biography in Kannada

Byadmin

Aug 6, 2022


ಜೀವನ ಮತ್ತು ಬೆಳವಣಿಗೆ

ಜೀವನ ಮತ್ತು ಬೆಳವಣಿಗೆ

ಜಗದೀಪ್ ಧನಕರ್ 18 ಮೇ, 1951ರಂದು ರಾಜಸ್ಥಾನದ ಜುಂಜುನುದಲ್ಲಿ ಜನಿಸಿದರು. ಧನಕರ್ ಅವರು ಮೇ 18, 1951 ರಂದು ರಾಜಸ್ಥಾನ ರಾಜ್ಯದ ಕಿತಾನ ಎಂಬ ಸಣ್ಣ ಹಳ್ಳಿಯಲ್ಲಿ ಜನಿಸಿದರು. ಅವರು ತಮ್ಮ ಶಾಲಾ ಶಿಕ್ಷಣವನ್ನು ಚಿತ್ತೋರ್‌ಗಢದ ಸೈನಿಕ ಶಾಲೆಯಲ್ಲಿ ಪೂರ್ಣಗೊಳಿಸಿದರು. ನಂತರ ಜೈಪುರದ ರಾಜಸ್ಥಾನ ವಿಶ್ವವಿದ್ಯಾಲಯದಿಂದ ಪದವಿ ಪಡೆದರು. ಧನಕರ್ ತನ್ನ ಪ್ರಾಥಮಿಕ ಶಿಕ್ಷಣವನ್ನು ಕಿತಾನ ಹಳ್ಳಿಯ ಶಾಲೆಯಲ್ಲಿ ಮುಗಿಸಿದರು.

70 ವರ್ಷದ ಇವರು ಉಪರಾಷ್ಟ್ರಪತಿ ಸ್ಥಾನಕ್ಕೆ ಎನ್‌ಡಿಎ ಅಭ್ಯರ್ಥಿಯಾಗುವ ಮುನ್ನ ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿ ಸೇವೆ ಸಲ್ಲಿಸುತ್ತಿದ್ದರು. ಇವರ ಪತ್ನಿ ಸುದೇಶ್ ಧಂಖರ್ ಆಗಿದ್ದು, ಇವರಿಗೆ ಒಬ್ಬ ಪುತ್ರರಿದ್ದಾರೆ.

ರಾಜಕೀಯ ಹಿನ್ನೆಲೆ

ರಾಜಕೀಯ ಹಿನ್ನೆಲೆ

ಭಾರತೀಯ ಜನತಾ ಪಕ್ಷಕ್ಕೆ ಸೇರಿದ ಒಬ್ಬ ಭಾರತೀಯ ರಾಜಕಾರಣಿಯಾದ ಜಗದೀಪ್ ಧನಕರ್, 2019ರ ಹೊತ್ತಿಗೆ ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿ ಸೇವೆ ಪ್ರಾರಂಭಿಸಿದ್ದರು. ಅದಕ್ಕೂ ಪೂರ್ವದಲ್ಲಿ ಭಾರತದ ಸುಪ್ರೀಂ ಕೋರ್ಟ್‌ನಲ್ಲಿ ವಕೀಲರಾಗಿ ಕಾರ್ಯ ನಿರ್ವಹಿಸಿದ್ದರು. 1989 ರಿಂದ 1991 ರವರೆಗೆ ಲೋಕಸಭೆಯ ಸದಸ್ಯರಾಗಿ ರಾಜಕೀಯ ಜೀವನ ಪ್ರಾರಂಭಿಸಿದ್ದರು. 9ನೇ ಲೋಕಸಭೆಯಲ್ಲಿ 1989-91ರ ಅವಧಿಯಲ್ಲಿ ರಾಜಸ್ಥಾನದ ಜುಂಜುನುದಿಂದ ಜನತಾ ದಳವನ್ನು ಪ್ರತಿನಿಧಿಸುವ ಸಂಸದರಾಗಿ ಆಯ್ಕೆ ಆಗಿದ್ದರು.

1993-98ರ ಅವಧಿಯಲ್ಲಿ 10ನೇ ವಿಧಾನಸಭೆ ಚುನಾವಣೆ ನಂತರದಲ್ಲಿ ರಾಜಸ್ಥಾನದ ಕಿಶನ್‌ಗಢ್‌ನಿಂದ ಸ್ಪರ್ಧಿಸಿ ಶಾಸಕಾಂಗ ಸಭೆಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಇದಲ್ಲದೇ ಜೈಪುರದ ರಾಜಸ್ಥಾನ ಹೈಕೋರ್ಟ್ ಬಾರ್ ಅಸೋಸಿಯೇಷನ್‌ನ ಮಾಜಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.

ಆಸ್ತಿ-ಪಾಸ್ತಿ ಮೌಲ್ಯ

ಆಸ್ತಿ-ಪಾಸ್ತಿ ಮೌಲ್ಯ

2020-2021 ಸಾಲಿನಲ್ಲಿ ಜಗದೀಪ್ ಧನಕರ್ ನಿವ್ವಳ ಮೌಲ್ಯವು ಗಮನಾರ್ಹವಾಗಿ ಏರಿಕೆಯಾಗುತ್ತದೆ. 70 ವರ್ಷ ವಯಸ್ಸಿನ ಜಗದೀಪ್ ಧನಕರ್ ಅವರ ಬೆಲೆ ಎಷ್ಟು? ಜಗದೀಪ್ ಧನಕರ್ ಅವರ ಆದಾಯದ ಮೂಲವು ಹೆಚ್ಚಾಗಿ ಯಶಸ್ವಿ ರಾಜಕಾರಣವೇ ಆಗಿದೆ. ಜಗದೀಪ್ ಧನಖರ್ ನಿವ್ವಳ ಮೌಲ್ಯವು 2021ರ ವೇಳೆಗೆ ಅಂದಾಜು 10 ರಿಂದ 50 ಲಕ್ಷ ಡಾಲರ್ ಎಂದು ಅಂದಾಜಿಸಲಾಗಿದೆ.

ಉಪರಾಷ್ಟ್ರಪತಿ ಚುನಾವಣೆ: ಜಗದೀಪ್ ಧನಕರ್‌ಗೆ ಬಿಜೆಪಿ ಟಿಕೆಟ್ ಕೊಟ್ಟಿದ್ದು ಯಾಕೆ?ಉಪರಾಷ್ಟ್ರಪತಿ ಚುನಾವಣೆ: ಜಗದೀಪ್ ಧನಕರ್‌ಗೆ ಬಿಜೆಪಿ ಟಿಕೆಟ್ ಕೊಟ್ಟಿದ್ದು ಯಾಕೆ?

ಮೇಲ್ಮನೆ ನಿಭಾಯಿಸುವ ಹೊಣೆಗಾರಿಕೆ

ಮೇಲ್ಮನೆ ನಿಭಾಯಿಸುವ ಹೊಣೆಗಾರಿಕೆ

ಜಗದೀಪ್ ಧನಕರ್ ಪಶ್ಚಿಮ ಬಂಗಾಳದಲ್ಲಿ ರಾಜ್ಯಪಾಲರಾಗಿ ಹೊಣೆಗಾರಿಕೆ ನಿಭಾಯಿಸಿದ ರೀತಿ ಬಿಜೆಪಿ ವರಿಷ್ಠರ ಗಮನ ಸೆಳೆದಿದೆ. ಅವರನ್ನು ಬಿಜೆಪಿ ಉಪರಾಷ್ಟ್ರಪತಿಯಾಗಿ ಆಯ್ಕೆ ಮಾಡಲು ಹಿಂದಿರುವ ಒಂದೆರಡು ಪ್ರಬಲ ಕಾರಣಗಳಲ್ಲಿ ಇದೂ ಒಂದೆನ್ನಲಾಗಿದೆ. ಉಪರಾಷ್ಟ್ರಪತಿ ಸ್ಥಾನ ಎಂಬುದು ಅಲಂಕೃತ ಹುದ್ದೆಯಲ್ಲ. ಸಂಸತ್ತಿನ ಮೇಲ್ಮನೆ ಎಂದು ಕರೆಯಲಾಗುವ ಹಾಗೂ ಚಿಂತಕರ ಚಾವಡಿಯೇ ಎನಿಸಿರುವ ರಾಜ್ಯಸಭೆಯ ಅಧ್ಯಕ್ಷ ಸ್ಥಾನವೂ ಅದು. ಬಹಳ ಕಠಿಣ ಚರ್ಚೆಗಳು ನಡೆಯುವ ರಾಜ್ಯಸಭೆಯ ಕಲಾಪವನ್ನು ಉಪರಾಷ್ಟ್ರಪತಿಗಳೇ ನಿರ್ವಹಿಸುತ್ತಾರೆ. ಲೋಕಸಭೆಗೆ ಹೋಲಿಸಿದರೆ ರಾಜ್ಯಸಭೆಯಲ್ಲಿ ಬಿಜೆಪಿಯ ಸಂಖ್ಯೆ ಕಡಿಮೆ. ಇಲ್ಲಿ ವಿಪಕ್ಷಗಳ ಸದಸ್ಯರ ಆರ್ಭಟವೇ ಹೆಚ್ಚಿರುತ್ತದೆ. ಇಲ್ಲಿ ವಿಪಕ್ಷಗಳ ಕೈ ಮೇಲಾಗದಂತೆ ಕಲಾಪವನ್ನು ನಿಭಾಯಿಸುವಂಥವರು ಬಿಜೆಪಿಗೆ ಬೇಕಿತ್ತು. ಅದಕ್ಕೆ ಸೂಕ್ತವಾಗಿರುವವರು ಜಗದೀಪ್ ಧನಕರ್.

ಜಗದೀಪ್ ಧನಕರ್ ರಾಜಕೀಯಕ್ಕೆ ಬರುವ ಮುನ್ನ ಹಲವು ವರ್ಷಗಳ ಕಾಲ ವಕೀಲಿಕೆ ವೃತ್ತಿ ಮಾಡಿದ್ದಾರೆ. ಅಲ್ಲದೇ 1990ರಲ್ಲಿ ಚಂದ್ರಶೇಖರ್ ಸರಕಾರದಲ್ಲಿ ಅವರು ಸಂಸದೀಯ ವ್ಯವಹಾರಗಳ ಸಚಿವರೂ ಅಗಿದ್ದರು. ಹೀಗಾಗಿ, ಅವರು ಸಂಸದೀಯ ಕಲಾಪಗಳ ಒಳಹೊರಗು ಚೆನ್ನಾಗಿ ಬಲ್ಲವರಾಗಿದ್ದಾರೆ. ವಕೀಲರಾಗಿ ವಾಕ್‌ಚಾತುರ್ಯ ಕೂಡ ಹೊಂದಿದ್ದಾರೆ. ಹೀಗಾಗಿ, ಉಪರಾಷ್ಟ್ರಪತಿ ಸ್ಥಾನಕ್ಕೆ ವೆಂಕಯ್ಯ ನಾಯ್ಡು ಸ್ಥಾನ ತುಂಬಲು ಜಗದೀಶ್ ಧನಕರ್ ಸಮರ್ಥರಿದ್ದಾರೆ.

ರೈತ ಪುತ್ರ ಎಂದು ಮೋದಿಯಿಂದ ಹೊಗಳಿಕೆ

ರೈತ ಪುತ್ರ ಎಂದು ಮೋದಿಯಿಂದ ಹೊಗಳಿಕೆ

ಜಗದೀಪ್ ಧನಕರ್ ಬಗ್ಗೆ ನರೇಂದ್ರ ಮೋದಿ ಹಿಂದೆ ಹಲವು ಬಾರಿ ಹೊಗಳಿದ್ದಿದೆ. ಕೃಷಿಕರ ಕುಟುಂಬದಿಂದ ಬಂದಿರುವ ಧನಕರ್ ಅವರನ್ನು ಪ್ರಧಾನಿ ಮೋದಿ ‘ಕಿಸಾನ್ ಪುತ್ರ್’ (ರೈತ ಪುತ್ರ) ಎಂದು ಹೊಗಳಿದ್ದಾರೆ. ಹಾಗೆಯೇ, ಪಶ್ಚಿಮ ಬಂಗಾಳದಲ್ಲಿ ದೀದಿ ಆಡಳಿತವನ್ನು ದಿಟ್ಟವಾಗಿ ರಾಜ್ಯಪಾಲರಾಗಿ ಟೀಕಿಸುವ ಛಾತಿ ಇರುವ ಧನಕರ್ ಅವರನ್ನು ‘ಜನತಾ ರಾಜ್ಯಪಾಲ’ ಎಂದು ಮೋದಿ ಪ್ರಶಂಸಿಸಿದ್ದಾರೆ. ರಾಜ್ಯಪಾಲರಾಗಿ ಜಗದೀಪ್ ಧನಕರ್ ಅಸಾಮಾನ್ಯ ರೀತಿಯಲ್ಲಿ ಕೆಲಸ ಮಾಡಿದ್ದಾರೆ ಎಂದು ಪ್ರಧಾನಿಗಳಿಂದ ಸರ್ಟಿಫಿಕೆಟ್ ಕೂಡ ಸಿಕ್ಕಿದೆ. ಒಂದು ಸಾಮಾನ್ಯ ಕುಟುಂಬದ ಹಿನ್ನೆಲೆ ಇರುವುದು ಒಂದೆಡೆಯಾದರೆ, ವಿವಿಧ ಶ್ರೇಣಿಗಳಲ್ಲಿ ವಿವಿಧ ರೀತಿಯ ಅನುಭವ ಹೊಂದಿರುವುದು ಇನ್ನೊಂದೆಡೆ ಇರುವ ಧನಕರ್‌ಗೆ ಉಪರಾಷ್ಟ್ರಪತಿ ಸ್ಥಾನದ ಬಾಗಿಲು ತೆರೆದಿದೆ.

(ಒನ್ಇಂಡಿಯಾ ಸುದ್ದಿ)