ಮಂಗಳವಾರ ಮಧ್ಯಾಹ್ನ ದೆಹಲಿ-ಎನ್ಸಿಆರ್ನಲ್ಲಿ ಪ್ರಬಲ ಭೂಕಂಪನದ ಅನುಭವವಾಗಿದೆ. ನೇಪಾಳದಲ್ಲಿ ಭೂಕಂಪವಾಗಿದ್ದು ದೆಹಲಿಯಲ್ಲೂ ಭೂ ಕಂಪನದ ಅನುಭವವಾಗಿದೆ. ಭೂಕಂಪ ಸಂಭವಿಸಿದ ತಕ್ಷಣ ಭೂಮಿ ಕಂಪಿಸಲಾರಂಭಿಸಿದ್ದು, ಜನರು ಗಾಬರಿಗೊಂಡು ಮನೆಯಿಂದ ಹೊರಬಂದಿದ್ದಾರೆ. ಈ ಭೂಕಂಪದಿಂದ ಯಾವುದೇ ಪ್ರಾಣಹಾನಿ ಅಥವಾ ಆಸ್ತಿ-ಪಾಸ್ತಿ ನಷ್ಟದ ಬಗ್ಗೆ ವರದಿಯಾಗಿಲ್ಲ. ದೆಹಲಿ-ಎನ್ಸಿಆರ್ನ ಕೆಲವು ಭಾಗಗಳಲ್ಲಿ ಬಲವಾದ ಕಂಪನಗಳು ಸಂಭವಿಸಿವೆ. ಭೂಕಂಪದ ಕೇಂದ್ರಬಿಂದುವನ್ನು ನೇಪಾಳದಲ್ಲಿ ಗುರುತಿಸಲಾಗಿದೆ. ಭೂಕಂಪನದ