ನವದೆಹಲಿ, ಜನವರಿ. 24: ಹೆಚ್ಚು ವಿವಾದಗಳಿಂದಲೇ ಸುದ್ದಿಯಲ್ಲಿರುವ ಬಾಲಿವುಡ್ ನಟಿ ಕಂಗನಾ ರಣಾವತ್ ತನ್ನ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಸುಮಾರು ಎರಡು ವರ್ಷಗಳ ಬಳಿಕ ಟ್ವಿಟರ್ಗೆ ಮತ್ತೆ ವಾಪಸ್ ಆಗಿದ್ದಾರೆ. ಮೇ 2021 ರಲ್ಲಿ ಆಕ್ಷೇಪಾರ್ಹ ಟ್ವೀಟ್ ಮಾಡಿದ್ದಕ್ಕಾಗಿ ಮೈಕ್ರೋಬ್ಲಾಗಿಂಗ್ ವೆಬ್ಸೈಟ್ ಟ್ವಿಟರ್ ಅವರ ಖಾತೆಯನ್ನು ಅಮಾನತುಗೊಳಿಸಿತ್ತು. ಮಂಗಳವಾರ ಮತ್ತೆ ಕಂಗನಾ ರಣಾವತ್ ಟ್ವಿಟರ್ಗೆ ಮರಳಿದ್ದಾರೆ.