Category: Kannada

ಭಾರತದಲ್ಲಿ ಪ್ರತಿನಿತ್ಯ 60 ರಿಂದ 70 ಲಕ್ಷ ಮಂದಿಗೆ ಕೊರೊನಾ ಲಸಿಕೆ

ನವದೆಹಲಿ, ಏಪ್ರಿಲ್ 23: ಭಾರತದಲ್ಲಿ ಕೊರೊನಾವೈರಸ್ ನಿಯಂತ್ರಣಕ್ಕಾಗಿ ಮೇ 1ರಿಂದ ಪ್ರತಿನಿತ್ಯ 60 ರಿಂದ 70 ಲಕ್ಷ ಫಲಾನುಭವಿಗಳು ಲಸಿಕೆ ಪಡೆದುಕೊಳ್ಳಲಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ನಿರೀಕ್ಷಿಸಿದೆ. ಮೇ 1ನೇ ತಾರೀಖಿನಿಂದ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ಕೊವಿಡ್-19 ಲಸಿಕೆ ಪಡೆದುಕೊಳ್ಳುವುದಕ್ಕೆ ಈಗಾಗಲೇ ಅನುಮತಿ ನೀಡಲಾಗಿದೆ. ಕೇಂದ್ರ ಸರ್ಕಾರದ ಹೊಸ ಮಾರ್ಗಸೂಚಿ

ಶವ ಸಾಗಿಸಲು 60 ಸಾವಿರ ಕೇಳಿದ ಆಂಬ್ಯುಲೆನ್ಸ್ ಚಾಲಕನ ಬಂಧನ

ಬೆಂಗಳೂರು, ಏಪ್ರಿಲ್ 23: ಸ್ಮಶಾನಕ್ಕೆ ಶವ ಸಾಗಿಸಲು 60 ಸಾವಿರ ರೂ. ಬೇಡಿಕೆ ಇಟ್ಟಿದ್ದ ಆಂಬ್ಯುಲೆನ್ಸ್ ಚಾಲಕರನ್ನು ಬಂಧಿಸಲಾಗಿದೆ. ಈ ಚಾಲಕರು ಮೃತರ ಕುಟುಂಬಸ್ಥರಿಂದ 16 ಸಾವಿರ ರೂ. ವಸೂಲಿ ಮಾಡಿದ್ದ ಹನುಮಂತಪ್ಪ ಸಿಂಗ್ರಿ ಹಾಗೂ ಹರೀಶ್ ಬಂಧಿತ ಆರೋಪಿಗಳು‌. ಅಂತ್ಯಸಂಸ್ಕಾರದಲ್ಲೂ ಬ್ಲಾಕ್‌ ಮಾರ್ಕೆಟ್, ಪ್ಯಾಕೇಜ್; ಬೆಂಗಳೂರಿನಲ್ಲಿ ಇದೆಂಥ ದುಃಸ್ಥಿತಿ? ಚಿತಾಗಾರಕ್ಕೆ ಶವ ಸಾಗಿಸಲು ಆ್ಯಂಬುಲೆನ್ಸ್ ಮಾಲೀಕರು

ಭಾರತ ಹಾಗೂ ಪಾಕಿಸ್ತಾನದ ವಿಮಾನಗಳಿಗೆ ಕೆನಡಾ ನಿಷೇಧ

ಕೆನಡಾ ಸರ್ಕಾರವು ಭಾರತ ಹಾಗೂ ಪಾಕಿಸ್ತಾನದ ವಿಮಾನಗಳ ಹಾರಾಟವನ್ನು 30 ದಿನಗಳ ಕಾಲ ನಿಷೇಧಿಸಿದೆ. ಭಾರತದಲ್ಲಿ 3 ಲಕ್ಷಕ್ಕೂ ಹೆಚ್ಚಿನ ದೈನಂದಿನ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲು ಹಲವು ರಾಷ್ಟ್ರಗಳು ಭಾರತದ ವಿಮಾನಗಳಿಗೆ ನಿರ್ಬಂಧ ಹೇರಿವೆ. ಅದರ ಸಾಲಿಗೆ ಈಗ ಕೆನಡಾ ಕೂಡ ಸೇರಿಕೊಂಡಿದೆ. 10 ದಿನ ಭಾರತ- ದುಬೈ ವಿಮಾನ ರದ್ದುಗೊಳಿಸಿದ ಎಮಿರೇಟ್ಸ್‌ ಸಾರಿಗೆ ಸಚಿವ ಓಮರ್

ಭಾರತದಲ್ಲಿ 97 ದಿನಗಳ ಕೊರೊನಾವೈರಸ್ ಲಸಿಕೆ ವರದಿ

ನವದೆಹಲಿ, ಏಪ್ರಿಲ್ 23: ಭಾರತದಲ್ಲಿ ಕೊರೊನಾವೈರಸ್ ನಿಯಂತ್ರಣಕ್ಕೆ ಲಸಿಕೆ ನೀಡುವ ಮಾರ್ಗ ಕಂಡುಕೊಳ್ಳಲಾಗಿದೆ. ಕಳೆದ 24 ಗಂಟೆಗಳಲ್ಲಿ 30 ಲಕ್ಷಕ್ಕೂ ಅಧಿಕ ಮಂದಿಗೆ ಕೊವಿಡ್-19 ಲಸಿಕೆ ನೀಡಲಾಗಿದೆ. ಗುರುವಾರ ರಾತ್ರಿ 8 ಗಂಟೆವರೆಗೆ 30,16,085 ಲಕ್ಷ ಜನರಿಗೆ ಕೊರೊನಾ ಲಸಿಕೆ ನೀಡಲಾಗಿದೆ. ಈ ಪೈಕಿ 18,33,828 ಮಂದಿಗೆ ಮೊದಲ ಡೋಸ್ ಹಾಗೂ 11,82,257 ಫಲಾನುಭವಿಗಳಿಗೆ ಎರಡನೇ ಡೋಸ್

ಕರ್ನಾಟಕ ಸೇರಿ 4 ರಾಜ್ಯಗಳಲ್ಲಿ ಮುಂದಿನ 2 ದಿನ ಭಾರಿ ಮಳೆಯ ಮುನ್ಸೂಚನೆ

ಬೆಂಗಳೂರು, ಏಪ್ರಿಲ್ 23: ಕರ್ನಾಟಕ ಸೇರಿದಂತೆ 4 ರಾಜ್ಯಗಳಲ್ಲಿ ಮುಂದಿನ 2 ದಿನ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ತಮಿಳುನಾಡಿನ ಒಳನಾಡಿನ ಜಿಲ್ಲೆಗಳಲ್ಲಿ ಸಾಕಷ್ಟು ಮಳೆಯಾಗಲಿದೆ. ರಾಜ್ಯದ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಕೆಲವು ಭಾಗಗಳಲ್ಲಿ ಚದುರಿದಂತೆ ಮಳೆಯಾಗುತ್ತಿದ್ದು, ಇನ್ನೂ ಎರಡು ದಿನ ಮುಂದುವರಿಯುವ ಸಾಧ್ಯತೆಗಳಿವೆ. ಭಾಗಶಃ ಮೋಡ ಕವಿದ ವಾತಾವರಣವಿದ್ದು,

ಕೊರೊನಾ ವಿರುದ್ಧ ಹೋರಾಟಕ್ಕೆ ಭಾರತಕ್ಕೆ ನೆರವಿನ ಹಸ್ತ ಚಾಚಲು ಮುಂದಾದ ಚೀನಾ

ಬೀಜಿಂಗ್, ಏಪ್ರಿಲ್ 23: ಗಡಿ ವಿಚಾರದಲ್ಲಿ ಚೀನಾ ದಿನನಿತ್ಯ ಒಂದಲ್ಲಾ ಒಂದು ಕ್ಯಾತೆಯನ್ನು ತೆಗೆಯುತ್ತಲೇ ಇದೆ. ಇದರ ನಡುವೆ ಕೊರೊನಾ ಸೋಂಕು ನಿವಾರಣೆಗೆ ಭಾರತಕ್ಕೆ ನೆರವಿನ ಹಸ್ತ ಚಾಚಲು ಮುಂದಾಗಿದೆ. ಸಾಂಕ್ರಾಮಿಕ ವಿರುದ್ಧದ ವೈದ್ಯಕೀಯ ಸರಬರಾಜುಗಳ ತಾತ್ಕಾಲಿಕ ಕೊರತೆಯೊಂದಿಗೆ ಭಾರತದಲ್ಲಿನ ಇತ್ತೀಚಿನ ಗಂಭೀರ ಪರಿಸ್ಥಿತಿಯನ್ನು ಚೀನಾ ಗಮನಿಸುತ್ತದೆ. ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸಲು ಭಾರತಕ್ಕೆ ಅಗತ್ಯವಾದ ಬೆಂಬಲ ಮತ್ತು

ಪಾಕಿಸ್ತಾನದ ಐಷಾರಾಮಿ ಹೋಟೆಲ್‌ನಲ್ಲಿ ಬಾಂಬ್ ಸ್ಫೋಟ, ನಾಲ್ವರು ಸಾವು

ಇಸ್ಲಾಮಾಬಾದ್, ಏಪ್ರಿಲ್ 23: ಪಾಕಿಸ್ತಾನದ ಐಷಾರಾಮಿ ಹೋಟೆಲ್‌ ಒಂದರಲ್ಲಿ ಬಾಂಬ್ ಸ್ಫೋಟಗೊಂಡಿದ್ದು ನಾಲ್ವರು ಮೃತಪಟ್ಟಿರುವ ಘಟನೆ ವರದಿಯಾಗಿದೆ. ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದ ಕ್ವೆಟ್ಟಾದ ಐಷಾರಾಮಿ ಹೋಟೆಲ್‌ ನ ಪಾರ್ಕಿಂಗ್ ಸ್ಥಳದಲ್ಲಿ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಕನಿಷ್ಠ ನಾಲ್ವರು ಸಾವನ್ನಪ್ಪಿದ್ದು, 12 ಮಂದಿ ಗಾಯಗೊಂಡಿದ್ದಾರೆ. ಬಾಂಬ್‌ ಸ್ಪೋಟದ ಕೃತ್ಯದ ಹೊಣೆ ತನ್ನದು ಎಂದು ಪಾಕಿಸ್ತಾನ ತಾಲಿಬಾನಿ

ಕೊರೊನಾ ಲಸಿಕೆ ಅಪ್ಡೇಟ್: ಬೆಲೆ, ನೋಂದಣಿ ಸಂಪೂರ್ಣ FAQs

ದೇಶದೆಲ್ಲೆಡೆ ಕೊವಿಡ್ 19 ಅಬ್ಬರ ಜೋರಾಗಿದ್ದು, ಕೇಂದ್ರ ಸರ್ಕಾರ ಕೂಡಾ ತನ್ನ ನಿರ್ಣಾಯಕ ಹೋರಾಟ ನಡೆಸಿದೆ. ಜನವರಿ 16ರಿಂದ ಭಾರತದಲ್ಲಿ ಲಸಿಕಾ ಅಭಿಯಾನವನ್ನು ಆರಂಭಿಸಲಾಗಿದ್ದು, ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ, ಎರಡನೇ ಹಂತದಲ್ಲಿ 60 ವರ್ಷ ಮೇಲ್ಪಟ್ಟವರಿಗೆ ಹಾಗೂ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತಿದೆ. ಮೇ 1ರಿಂದ ಮೂರನೇ ಹಂತದ ಲಸಿಕಾ ಅಭಿಯಾನ ಆರಂಭಗೊಳ್ಳಲಿದ್ದು, 18

ಪಶ್ಚಿಮ ಬಂಗಾಳದಲ್ಲಿ ರೋಡ್‌ಶೋ, ಬೈಕ್ ಜಾಥಾಗೆ ಬ್ರೇಕ್ ಹಾಕಿದ ಚುನಾವಣಾ ಆಯೋಗ

ನವದೆಹಲಿ, ಏಪ್ರಿಲ್ 22: ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಪ್ರಚಾರ ಸಂದರ್ಭ ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘನೆ ಮಾಡಿರುವುದು ಕಂಡುಬಂದಿದ್ದು, ಚುನಾವಣಾ ಆಯೋಗ ತಕ್ಷಣವೇ ಜಾರಿಗೆ ಬರುವಂತೆ ರಾಜ್ಯದಲ್ಲಿ ರೋಡ್‌ಶೋ ಹಾಗೂ ಬೈಕ್ ಜಾಥಾ ರದ್ದುಗೊಳಿಸಿದೆ. ಐನೂರಕ್ಕೂ ಹೆಚ್ಚು ಜನ ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸುವಂತಿಲ್ಲ ಎಂದು ಆದೇಶಿಸಿದೆ. ಒಂದೇ ದಿನ 3 ಹಂತಗಳ ಚುನಾವಣೆ ಸಾಧ್ಯವೇ ಇಲ್ಲ; ಚುನಾವಣಾ ಆಯೋಗ

ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಿ; ಯಡಿಯೂರಪ್ಪ

ಬೆಂಗಳೂರು, ಏಪ್ರಿಲ್ 22: ಕೊರೊನಾ ಸೋಂಕಿನಿಂದ ಗುಣಮುಖರಾಗಿ ಗುರುವಾರ ಸಿಎಂ ಯಡಿಯೂರಪ್ಪ ಅವರು ಆಸ್ಪತ್ರೆಯಿಂದ ಗುಣಮುಖರಾಗಿದ್ದಾರೆ. ನಂತರ ಬೆಂಗಳೂರಿನಲ್ಲಿ ಕೊರೊನಾ ನಿರ್ವಹಣೆ ಕುರಿತು ವರ್ಚುಯಲ್ ಸಭೆ ನಡೆಸಿ ಹಲವು ವಿಷಯಗಳ ಕುರಿತು ಚರ್ಚಿಸಿದ್ದಾರೆ. ಮುಖ್ಯವಾಗಿ ನಗರದಲ್ಲಿ ಆಮ್ಲಜನಕ ಪೂರೈಕೆಯ ಕುರಿತು ಚರ್ಚೆ ನಡೆಸಿದ್ದು, ಆಕ್ಸಿಜನ್ ಪೂರೈಕೆ ಮತ್ತು ಔಷಧ ಕೊರತೆಯ ಸಮಸ್ಯೆಯನ್ನು ಬಗೆಹರಿಸಲಾಗಿದೆ ಎಂದು ಆರೋಗ್ಯ ಸಚಿವ